1. ಚಿನ್ನದ ಸಾಲವೆಂದರೇನು?
ನಿಮ್ಮ ಚಿನ್ನ ಅಥವಾ ಚಿನ್ನಾಭರಣಗಳ ಮೇಲೆ ಪಡೆದಂತಹ ಸಾಲಕ್ಕೆ ಚಿನ್ನದ ಸಾಲ ಎನ್ನುವರು. ನಿಮ್ಮ ಚಿನ್ನವನ್ನು ಒಂದು ನಿರ್ದಿಷ್ಟ ಹಣಕ್ಕಾಗಿ ಬ್ಯಾಂಕಿಗೆ ನೀವು ನೀಡಿದಾಗ ಅದನ್ನು ಚಿನ್ನದ ಸಾಲವೆಂದು ವರ್ಗೀಕರಿಸಲಾಗುವುದು. ಅತಿ ಕಡಿಮೆ ದಾಖಲೆಗಳೊಂದಿಗೆ ಸ್ಪರ್ಧಾತ್ಮಕ ಚಿನ್ನದ ಸಾಲದ ಬಡ್ಡಿ ದರಗಳಲ್ಲಿ ಹಾಗೂ ಸರಳ ಮರುಪಾವತಿ ಅವಧಿಯಲ್ಲಿ ನಿಮ್ಮ ಚಿನ್ನಕ್ಕೆ ನೀಡುವ ಸಾಲ, ಇದೊಂದು ತ್ವರಿತ ಮತ್ತು ನೇರ ಪ್ರಕ್ರಿಯೆಯಾಗಿದೆ.
2. ಚಿನ್ನದ ಸಾಲವನ್ನು ಪಡೆಯಲು ಯಾರು ಅರ್ಹರು?
ಒಬ್ಬ ಭಾರತೀಯ ನಿವಾಸಿ, 21 ರಿಂದ 60 ವರ್ಷಗಳೊಳಗಿರುವ ಒಬ್ಬ ವ್ಯಾಪಾರಿ, ಉದ್ಯಮಿ, ಕೃಷಿಕ, ಮಾಸಿಕ ವೇತನವನ್ನು ಪಡೆಯುವ ಅಥವಾ ಸ್ವಯಂ ಉದ್ಯೋಗಿ ವ್ಯಕ್ತಿಗಳು HDFC ಬ್ಯಾಂಕಿನಲ್ಲಿ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹರು. ನಮ್ಮ Gold Loan eligibility calculator ಮೂಲಕ ನೀವು ನಿಮ್ಮ ಅರ್ಹತೆಯನ್ನು ಪರಿಶೀಲಿಸಬಹುದು.
3. ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?
HDFC ಬ್ಯಾಂಕಿನಲ್ಲಿ ಚಿನ್ನದ ಸಾಲವನ್ನು ನೀವು ಪಡೆಯಬೇಕಾದಲ್ಲಿ ಈ ಕೆಳಗಿನ ದಾಖಲೆಗಳು ಅಗತ್ಯವಿರುತ್ತವೆ:
ಒಂದು ಪಾಸ್ ಪೋರ್ಟ್ ಸೈಸ್ ಫೋಟೋಗ್ರಾಫ್
ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಕಾರ್ಡ್ (ಮೇಲೆ ತಿಳಿಸಲಾದ ಯಾವುದಾದರೂ ಒಂದು ದಾಖಲೆಯೊಂದಿಗೆ) ಅಥವಾ ಫಾರ್ಮ್ 60
ಪಾಸ್ಪೋರ್ಟ್ (ಅವಧಿ ಮುಗಿಯದ)
ಡ್ರೈವಿಂಗ್ ಲೈಸೆನ್ಸ್ (ಅವಧಿ ಮುಗಿಯದ)
ವೋಟರ್ಸ್ ಐಡಿ ಕಾರ್ಡ್
UIDAI ನೀಡಲಾದ ಆಧಾರ್ ಕಾರ್ಡ್
ಕೃಷಿಗೆ ಸಂಬಂಧಪಟ್ಟ ವೃತ್ತಿಗಳ ದಾಖಲಾತಿಗಳು (ಕೃಷಿ ಗ್ರಾಹಕರಿಗೆ ಬುಲೆಟ್ ಮರುಪಾವತಿ ಇದ್ದಲ್ಲಿ)
4. ನೀವು ಯಾವಾಗ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಬೇಕು?
ಒಂದು ನಿರ್ದಿಷ್ಟ ಅಂತಿಮ ಉದ್ದೇಶಕ್ಕೆ ನಿಮಗೆ ಹಣ ಅಗತ್ಯವಿರುವಾಗ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಸಾಲ ವಿತರಣೆಯ ಸಮಯ ಕೇವಲ 45 ನಿಮಿಷಗಳಾಗಿರುವುದರಿಂದ ನೀವು ನಿಮ್ಮ ಹತ್ತಿರದ ಯಾವುದೇ HDFC ಬ್ಯಾಂಕ್ ಶಾಖೆಗಳಲ್ಲಿ ಯಾವುದೇ ತುರ್ತು ಪರಿಸ್ಥಿಗಳಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಬಹುದು.
5. ಚಿನ್ನದ ಸಾಲವನ್ನು ಮರುಪಾವತಿಸದಿದ್ದರೆ ಏನಾಗುತ್ತದೆ?
ಚಿನ್ನದ ಸಾಲವನ್ನು ಮರುಪಾವತಿ ಮಾಡದೆ ಇರುವ ಸಂದರ್ಭದಲ್ಲಿ ಬ್ಯಾಂಕ್ ಇಎಂಐಗಳ ಬಗ್ಗೆ ರಿಮೈಂಡರುಗಳನ್ನು ಇಮೇಲ್ ಮತ್ತು ಸಂದೇಶಗಳ ಮೂಲಕ ಸಾಲಗಾರರಿಗೆ ಕಳುಹಿಸಲು ಪ್ರಾರಂಭಿಸುತ್ತದೆ. ಒಂದು ನಿಗದಿತ ಅವಧಿಯ ನಂತರ ಕೆಲವು ದಂಡ ಶುಲ್ಕಗಳು ಅಥವಾ ಬಡ್ಡಿ ದರಗಳನ್ನು ಚಿನ್ನದ ಸಾಲದ ಮೇಲೆ ವಿಧಿಸಲು ಬ್ಯಾಂಕ್ ನಿರ್ಧರಿಸುತ್ತದೆ. ಪದೇ ಪದೇ ರಿಮೈಂಡರುಗಳನ್ನು ಕಳುಹಿಸದ ನಂತರವೂ ಚಿನ್ನದ ಸಾಲವನ್ನು ಮರುಪಾವತಿಸಲಿಲ್ಲವಾದರೆ ಬ್ಯಾಂಕ್ ಚಿನ್ನದ ಆಭರಣಗಳನ್ನು ಹರಾಜು ಮೂಲಕ ಅಥವಾ ಮಾರಾಟ ಮಾಡಿ ಸಾಲವನ್ನು ಮರುಪಾವತಿಸುತ್ತದೆ.
6. ನಾನು ಚಿನ್ನದ ಸಾಲವನ್ನು ಹೇಗೆ ಮರುಪಾವತಿಸಬೇಕು?
ಚಿನ್ನದ ಸಾಲವನ್ನು ಬಡ್ಡಿ ದರ ಹಾಗೂ ನೀಡಲಾದ ಅವಧಿ ಆಧಾರದ ಮೇಲೆ ಲೆಕ್ಕ ಮಾಡಿ ಸುಲಭ ಕಂತುಗಳಲ್ಲಿ ಮರುಪಾವತಿಸಬಹುದು. ಸಾಲವು ಅವಧಿ ಸಾಲ (ಟರ್ಮ್ ಲೋನ್), ಓವರ್ ಡ್ರಾಫ್ಟ್ ಅಥವಾ ಬುಲೆಟ್ ಮರುಪಾವತಿ ಸೌಲಭ್ಯಗಳಲ್ಲಿ ಲಭ್ಯ. ನೀವು ಪ್ರತಿ ತಿಂಗಳೂ ಬಡ್ಡಿಯನ್ನು ಮಾತ್ರ ಪಾವತಿಸುವುದು ಅಥವಾ ನಿಯಮಿತ ಇಎಂಐ ಅನ್ನು ಪ್ರತಿ ತಿಂಗಳೂ ಪಾವತಿಸುವ ಆಯ್ಕೆಯನ್ನು ಆರಿಸಬಹುದು. ನಿಮ್ಮ ಮಾಸಿಕ ಸಾಲ ಮರುಪಾವತಿ 1 ಲಕ್ಷಕ್ಕೆ 1,000 ರೂಪಾಯಿಗಳಷ್ಟು ಕನಿಷ್ಠವಾಗಿರಬಹುದು (ಇದು ವಾರ್ಷಿಕ 12% ಸೂಚಿತ ಬಡ್ಡಿ ದರವನ್ನು ಆಧರಿಸಿರುತ್ತದೆ). ನೀವು ಬುಲೆಟ್ ಮರುಪಾವತಿಯ ಸೌಲಭ್ಯವನ್ನು ಆಯ್ಕೆ ಮಾಡಿದಲ್ಲಿ ಅಸಲು ಮತ್ತು ಬಡ್ಡಿಯನ್ನು ಒಂದು ವರ್ಷದ ನಂತರ ಪಾವತಿಸಬಹುದು.
7. ನಾನು ನನ್ನ ಚಿನ್ನದ ಸಾಲವನ್ನು ಮುಂಚಿತವಾಗಿ ಮರುಪಾವತಿಸಬಹುದೇ?
ಹೌದು. ನೀವು ಚಿನ್ನದ ಸಾಲವನ್ನು ಮುಂಚಿತವಾಗಿ ಮರುಪಾವತಿಸಬಹುದು. ಆದರೆ, ಕೆಲವು ಶುಲ್ಕಗಳು ಅನ್ವಯವಾಗಬಹುದು. ಮುಂಚಿತವಾಗಿ (ಫೋರ್ ಕ್ಲೋಷರ್) ಮರುಪಾವತಿ ಮಾಡಲು 2%+GST – ಚಿನ್ನದ ಸಾಲವನ್ನು ಪಡೆದ 6 ತಿಂಗಳೊಳಗಾಗಿ ಮಾಡಿದಲ್ಲಿ. 6 ತಿಂಗಳ ನಂತರ ನೀವು ಫೋರ್ ಕ್ಲೋಸ್ ಮಾಡಿದಲ್ಲಿ ಯಾವುದೇ ಶುಲ್ಕಗಳಿಲ್ಲ.